Thursday, 8 March 2012

ಪ್ರೀತಿಯ ದಾರಿ....

ಜೀವನದ ಹಾದಿಯನ್ನು ಮೊದಲೇ ನಿಗದಿ ಪಡಿಸೋದು ಬಹಳ ಕಠಿಣ. ಜೀವನದಲ್ಲಿ ಮುಂದೆ ಸಾಗುತ್ತಾ ಸಾಗುತ್ತಾ ನಾವು ಯಾರನ್ನು ಭೇಟಿ ಆಗುತ್ತೇವೆ ಅನ್ನುವುದು ನಮಗೆ ಅರಿಯದ ವಿಷಯ. ಎಲ್ಲಿಯೋ ಸಿಕ್ಕಿದ ಒಬ್ಬ ವ್ಯಕ್ತಿ ನಮಗೆ ಯಾವೊದೋ ಜನ್ಮದ ಗೆಳೆಯ ಅನ್ನುವ ಭಾವನೆ ಹುಟ್ಟಿಸುವಂತೆ ಆಗುತ್ತದೆ.
ಅಂತಹ ಒಂದು ಪವಿತ್ರ ಭಾಂದವ್ಯ ಈಗ ಕೂಡ ಇದೆ ಅನ್ನುವುದು ಒಂದು ವಿಶೇಷ ಹಾಗೂ ಕುತುಹಳಕಾರಿ ವಿಷಯ. ಪ್ರೇಮಿಗಳ ನಡುವೆ ಮೊದಲನೋಟದಲ್ಲೇ ಹುಟ್ಟುವ ಪ್ರೇಮವನ್ನು ಕೇಳಿದ್ದೇವೆ ಆದರೇ ತಂದೆ ಮಗಳ ನುದುವಲ್ಲಿ ಮೊದಲ ನೋಟದಲ್ಲಿ ಪ್ರೇಮ? ಅಲ್ಲ ತಾಯಿ ಮಗನ ನಡುವಲ್ಲಿ ಅಥವಾ ಸಹೋದರ ಸಹೋದರಿಯರ ನಡುವಲ್ಲಿ ಮೊದಲನೋತೋದಲ್ಲಿ ಪ್ರೇಮ? ಸಾದ್ಯವೇ ಇಲ್ಲ ಅಂತ ಅಂದುಕೊಳ್ಳುವುದು ತಪ್ಪಾಗಬಹುದು. ಪ್ರೀತಿ, ಪ್ರೇಮ  ಅನ್ನುವುದು ಎಲ್ಲ ಸಂಬಂಧಗಳ್ಳಲ್ಲು ಇರುವಂತಹ  ಒಂದು ಮೂಲಭೂತ ವಿಷಯ. ಹಾಗಾದರೆ ನಮ್ಮ ಮನೆಯಲ್ಲಿ ಸಿಗುವ ಪ್ರೀತಿ, ಪ್ರೀತಿ ಅಲ್ಲವೇ?
ಪ್ರೀತಿ ಹೌದು ಎಂದಾದರೆ, ನಮ್ಮ ತಂದೆ, ತಾಯಿ, ಸಹೋದರ ಸಹೋದರಿಯರೂ ನಮ್ಮ ಜೀವನದ ಅತ್ಯಂತ ಆತ್ಮೀಯ ಗೆಳೆಯರೂ ಹಾಗು ಪ್ರೇಮಿಗಳು ಆಗಲೇ ಬೇಕು. ನಮ್ಮ ಜೀವನದ ಜ್ಯೋತಿಯನ್ನು ಸಂರಕ್ಷಿಸಿ ಬೆಳೆಸುವವರು. ಆದರೇ, ಛಿ....ಎದೆಂಥಹ ಮಾತು ಅನ್ನುವ ಭಾವನೆ ನಿಮ್ಮದಾದರೆ , ಒಮ್ಮೆ ನಿಮ್ಮ ತಂದೆ ಅಥವಾ ತಾಯಿಯ ಹತ್ತಿರ ಕೇಳಿ ನೋಡಿ, ನಿಮ್ಮನ್ನು ಮೊದಲು ಕಂಡು ಕೈಯಲ್ಲಿ ಎತ್ತಿಕೊಳ್ಳುವಾಗ ಅವರಿಗೆ ಏನು ಅನ್ನಿಸಿತ್ತು? ಅವರ ಉತ್ತರ ಯಾವಾಗಲೂ "ಲವ್ ಅಟ್ ಫಸ್ಟ್ ಸೈಟ್ " ಅಥವಾ ಮೊದಲನೋಟದಲ್ಲಿ ಪ್ರೇಮ. ಮಗುವಿಗೆ ತನ್ನ ತಂದೆಯೇ ಲೋಕದ ನಾಯಕ, ತನ್ನ ತಾಯಿಯೇ ವಿಶ್ವದಸುಂದರಿ. ಇದ್ದನೇ ನಾವು ಪ್ರೇಮಿಗಳ್ಳಲ್ಲಿ ಹುಡುಕುವುದು?
ಹುಡುಕಾಟವನ್ನು ಬಿಟ್ಟು ಕಣ್ತೆರೆದು ನೋಡಿ.....ಸಾಕ್ಷಾತ್ ದೇವರಂತಿರುವ ನಮ್ಮ ಪರಿವಾರ ಸದಾ ನಮ್ಮೊಂದಿಗೆ ಇರುತ್ತದೆ. ಹೊರಪ್ರಪಂಚದಲ್ಲಿ ನಮ್ಮ ಡ್ರೀಮ್ ಬಾಯ್ ಅಥವಾ ಡ್ರೀಮ್ ಗರ್ಲ್ ಮಾತ್ರವಲ್ಲ ತಂದೆ ತಾಯಿಯಂದ್ರು ಎಲ್ಲೆಲ್ಲೂ ಕಾಯುತ್ತ ಇರುತ್ತಾರೆ. ಕಣ್ಣಲ್ಲಿ ಕಣ್ಣಿಟ್ಟು ನೋಡಿ......ಹಿಂದಿನ ಜನುಮದಲ್ಲಿ ನಿಮ್ಮ ಹೆತ್ತವರು ಕಾಣಿಸಿಕೊಳ್ಳಬಹುದು.
ಇಂಥಹ ಅನುಭವ ನಿಮಗಾದರೆ, ಖಂಡಿತ ಒಪ್ಪಿಕೊಳ್ಳುತೀರಿ ಈ ವಿಭಿನ್ನವಾದ ಪ್ರೇಮ ಕಥೆಯನ್ನು......