Wednesday, 11 April 2012

ಮಾತು,ಮಾತು,ಯಾವತ್ತು ಮಾತು

ನಾನು ಪಾಠ ಕೇಳುತ್ತಿದ್ದೆ ಭಕ್ತಿಂದ
ಕರೆ ಬಂತು, ತಕ್ಷಣ ಬಾ ಎಂದು  
ಓಡಿ ಹೋಗಿ ನಿಂತೆ ಭಯದಿಂದ 
ಹೇಳಿದರು ಸ್ಪರ್ಧೆಗೆ ತಯಾರಾಗಲೆಂದು

ಆಲೋಚನೆ ಮಾಡ ತೊಡಗಿದೆ 
ಏನು ಮಾತನಾಡಬೇಕೆಂದು 
ವಿಷಯ ಸಂಗ್ರಹಿಸಲು ಬಯಸಿದೆ 
ನನ್ನ ಜ್ಞಾನವನ್ನು ವೃದ್ಧಿಸಲು

ಅಲ್ಪ-ಸ್ವಲ್ಪ ತಿಳಿದುಕೊಂಡು ಹೊರಟೆನು
ಸ್ಪರ್ದೆಯಲ್ಲಿ ಭಾಗವಹಿಸಲೆಂದು
ವೇದಿಕೆಗೆ ಹತ್ತಿ ನಿಂತೆನು 
ವಿಷಯ ಮಾತನಾಡಲೆಂದು

ಮಾತು ಮುಗಿಸಿ ಕುಳಿತೆ
ಸ್ಪರ್ಧರ್ಥಿಗಳ  ವಿಷಯ ಕೇಳಲೆಂದು 
ಎಲ್ಲರು ಮಂಡಿಸಿದರೂ ನನ್ನಂತೆ 
'ನಮ್ಮ ಭವಿಷ್ಯ' ಹೀಗಿರುವುದೆಂದು 

ಮೂರು ಘಂಟೆ ಕೇಳಿ ಸುಸ್ತಾಯಿತು 
ಎದ್ದು ಹೋಗಲು ಅವಿನಯವೆಂದು 
ಆಗ ನನಗೆ ಅರಿವಾಯಿತು 
ಬರಿ ಮಾತು ಬೇರೆಯವರಿಗೆ ಹೀಗಾಗುತಿತ್ತು ಎಂದು 

ಹಾಗಾಗಿಯೇ ಭೋದಿಸಿದರು ನಮ್ಮ ಹಿರಿಯರು 
ಮಾತು ಬೆಳ್ಳಿ,ಮೌನ ಚಿನ್ನವೆಂದು 
ಆದರೇ ನನಗೆ ಬೇಕಾಯಿತು ತಿಳಿಯಲು 
ಮಾತಿನ ಸುರಿಮಳೆ ಇಂದು

ಸದಾ ನೆನಪಿರಲಿ.....
ಮಾತು ಬೆಳ್ಳಿ ಆದರೇ ಮೌನ ಬಂಗಾರ....




1 comment:

  1. ಮಾತು ಬೆಳ್ಳಿ - ಮೌನ ಬಂಗಾರ..
    ಬರಹ?
    ;)
    ಪ್ರೈಸು ನಿನಗೇ ಆದಿಕ್ಕು ಅಲ್ಲದಾ? :)

    ReplyDelete