Tuesday, 1 May 2012

ಜ್ಞಾನ.....

ನಗುನಗುತ್ತ ಏಳಬೇಕಾಗಿದೆ 
ಆದರೆ ಸಮಸ್ಯೆ ಮಾತ್ರ ನೆನಪಾಗುತ್ತಿದೆ 
ಪ್ರೀತಿಯಿಂದ ಮಾತನಾದಬೇಕಾಗಿದೆ 
ಆದರೆ ವಿಷಯದ ಕೊರತೆ ಕಾಡುತ್ತಿದೆ 

ಸತತವಾಗಿ ಪರಿಶ್ರಮ ಮಾಡಬೇಕಾಗಿದೆ 
ಆದರೆ ಸೋಮಾರಿತನದಲ್ಲಿ ಪ್ರತಿದಿನ ಕಳೆದು ಹೋಗುತ್ತಿದೆ 
ಹೊಸ ದಾರಿಯಲ್ಲಿ ಸಾಗಬೇಕಾಗಿದೆ 
ಆದರೆ ಹಳೆ ದಾರಿದೀಪವನ್ನು ಆರಿಸಲಾಗಿದೆ 

ಸಂಬಂಧಗಳನ್ನು ಉಳಿಸಬೇಕಾಗಿದೆ 
ಆದರೆ ವಿಶ್ವಾಸ ಆತ್ಮೀಯತೆ ಕಡಿದು ಹೋಗುತ್ತಿದೆ 
ಸನ್ಮಾರ್ಗ ಹುಡುಕಬೇಕಾಗಿದೆ 
ಆದರೆ ದುರ್ಮಾರ್ಗ ನಿರಂತರ ಕರೆಯುತ್ತಿದೆ 

ಜೀವನದಲ್ಲಿ ಜಿಗುಪ್ಸೆ ಬಂದಂತಾಗಿದೆ 
ಆದರೂ ಉಲ್ಲಾಸದಿಂದ ದಿನವಿಡಿ ಕಳೆಯಬೇಕಾಗಿದೆ 

ಎಂತಹ ಪಾಡು! ಇದು ಮನುಷ್ಯನಿಗೆ ಬೇಕಾ?

1 comment:

  1. ಜೀವನ ಹೇಳಿರೆ ಇದೇ ಅಲ್ದಾ ಪುಟ್ಟತ್ತಿಗೇ... :)

    ReplyDelete